ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು: ನಿಖಿಲ್ ಕುಮಾರಸ್ವಾಮಿ

ನಟ ನಿಖಿಲ್ ಕುಮಾರಸ್ವಾಮಿ ಸಕ್ರಿಯ ರಾಜಕಾರಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಗೌಡ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಗೌಡ
ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಸಕ್ರಿಯ ರಾಜಕಾರಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಿಖಿಲ್ ಗೌಡ ಜೆಡಿಎಸ್ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ಸುಳಿವು ನೀಡಿದ್ದಾರೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತಿಗೆ ಸಿಕ್ಕಾಗ:
ನಿಮ್ಮ ಗೆಲುವಿಗೆ ಎಷ್ಟು ಅವಕಾಶಗಳಿವೆ?
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಹಲವು ಕಾರಣಗಳಿವೆ. ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ನಾವು ಮೈತ್ರಿ ಸರ್ಕಾರದಲ್ಲಿರುವುದರಿಂದ ನನ್ನ ಅಭ್ಯರ್ಥಿತನಕ್ಕೆ ಕಾಂಗ್ರೆಸ್ ಬೆಂಬಲ ಕೂಡ ಇದೆ. ಮಂಡ್ಯ ಜನತೆ ಜೊತೆಗೆ ನನ್ನ ತಂದೆಯವರ ಸಂಪರ್ಕ ಮತ್ತು ಸಂಬಂಧ ಕೂಡ ಚೆನ್ನಾಗಿದೆ.
ಸುಮಲತಾ ಅಂಬರೀಷ್ ಅವರು ಈಗಾಗಲೇ ಮಂಡ್ಯದಲ್ಲಿ ಪ್ರವಾಸ ಮತ್ತು ಪ್ರಚಾರ ಕೈಗೊಂಡಿದ್ದಾರೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಭಾರತದಲ್ಲಿ ಪ್ರತಿಯೊಬ್ಬರೂ ಚುನಾವಣೆಗೆ ನಿಂತು ಸ್ಪರ್ಧಿಸುವ ಅರ್ಹತೆ ಹೊಂದಿರುತ್ತಾರೆ. ಅವರನ್ನು ನಾನು ತಡೆಯುವುದಿಲ್ಲ.
ಸುಮಲತಾ ಅವರಿಗೆ ಅನುಕಂಪದ ಮತಗಳು ಸಿಗುತ್ತದೆ ಎಂದು ನಿಮಗೆ ಅನಿಸುತ್ತದೆಯೆ?
-ರಾಜಕೀಯದಲ್ಲಿ ಹಲವು ಶತ್ರುಗಳಿರುತ್ತಾರೆ. ಒಳ್ಳೆಯ ಕೆಲಸ ಮಾಡಿದರೂ ಕೂಡ ರಾಜಕಾರಣಿಗಳನ್ನು ಟೀಕಿಸುವವರು ಇರುತ್ತಾರೆ. ಅಂತಹ ಟೀಕೆಗಳಿಗೆ ನಾನು ಗಮನ ಕೊಡುವುದಿಲ್ಲ. ನನಗೆ ಏನು ಅಗತ್ಯವಿದೆ ಅದರ ಕಡೆಗೆ ಮಾತ್ರ ಗಮನ ಕೊಡುತ್ತೇನೆ.
ನಿಮ್ಮ ತಂದೆ ಮತ್ತು ತಾತನಿಂದ ಕಲಿತ ಅಂಶವೇನು?
ನನ್ನ ತಾತ ಯಾವತ್ತಿಗೂ ಸೋಲೊಪ್ಪುವುದಿಲ್ಲ. ಅವರು ಒಬ್ಬ ಹೋರಾಟಗಾರ. ಸಾಮಾನ್ಯ ಜನರೊಡನೆ ಬೆರೆಯುವುದನ್ನು ನಾನು ನನ್ನ ತಂದೆಯಿಂದ ಕಲಿತೆ.
ಅವರ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತದೆಯೇ?
ತಂದೆಯ ಜೊತೆ ಸಮಯ ಕಳೆಯುತ್ತೇನೆ, ತಾತನ ಜೊತೆಗೆ ಸಹ ಉತ್ತಮ ಸಂಬಂಧವಿದೆ. ಕುಟುಂಬ ತುಂಬಾ ಮುಖ್ಯವಾಗುತ್ತದೆ. ಕುಟುಂಬದವರ ಜೊತೆ ಸಮಯ ಕಳೆಯುತ್ತೇನೆ.
ನೀವು ಗೆದ್ದರೆ ಏನು ಮಾಡುತ್ತೀರಿ?
ಮಂಡ್ಯದ ಯುವಜನತೆ ಬಗ್ಗೆ ನನಗೆ ಕೆಲವು ಆಲೋಚನೆಗಳಿವೆ, ನಿರುದ್ಯೋಗ ಒಂದು ಗಂಭೀರ ವಿಷಯ. ಅದನ್ನು ಮೊದಲು ನಿವಾರಿಸಬೇಕು. ಮಂಡ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ 9 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ನಲ್ಲಿ ನೀಡಿದೆ. ಶಿಕ್ಷಣದ ಮೇಲೆ ಕೂಡ ಗಮನ ಹರಿಸುತ್ತೇನೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ನನಗೆ ಆದ್ಯತೆ ವಿಷಯ.
ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ವಿಶೇಷ ತಂತ್ರಗಳಿವೆಯೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com